ಬಂದಾರು :ನಾಳೆ.( ನ.20 ) ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ ಹಾಗೂ ಜನವಿರೋಧಿ ನೀತಿಗಳ ವಿರುದ್ಧ , ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಸತಿ ಯೋಜನೆ ಮತ್ತು ರೈತರ ಬೆಳೆವಿಮೆ ಅನ್ಯಾಯದ ವಿರುದ್ಧ ಜನಾಂದೋಲನ ಪ್ರತಿಭಟನಾ ಸಭೆ ಬಂದಾರು ಗ್ರಾಮ ಪಂಚಾಯತ್ ವಠಾರ ದಲ್ಲಿ ನಾಳೆ ನವೆಂಬರ್ 20 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ, ನಂತರ ಪಂಚಾಯತ್ ಪಿಡಿಓ ಮೂಲಕ ಮನವಿ ನೀಡಲಿರುವುದು .* *ಈ ಸಭೆಯಲ್ಲಿ ಮಾನ್ಯ ಶಾಸಕರು ರಾಜ್ಯ, ಜಿಲ್ಲೆ, ಮತ್ತು ಬೆಳ್ತಂಗಡಿ ಮಂಡಲ ಪ್ರಮುಖರು ಭಾಗವಹಿಸಲಿದ್ದಾರೆ.* ಬಂದಾರು ಹಾಗೂ ಮೊಗ್ರು ಗ್ರಾಮದ ನಾಗರಿಕರು ಈ ಸಭೆಯಲ್ಲಿ ಭಾಗವಹಿಸಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂದಾರು :ನಾಳೆ.( ನ.20 ) ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ ವಿರೋಧಿಸಿ ಜನಾಂದೋಲನ ಬೃಹತ್ ಪ್ರತಿಭಟನಾ ಸಭೆ
Namana








