ಕೊಕ್ಕಡ: ಡಾ.ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಕೇಸರಿ ಗೆಳೆಯರ ಬಳಗ ಕೊಕ್ಕಡ ಇವರ ಸಹಭಾಗಿತ್ವದಲ್ಲಿ, ಕೇಸರಿ ಟೈಗರ್ಸ್ ಕೊಕ್ಕಡ ಇವರಿಂದ 70 ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹದ ಪ್ರಯುಕ್ತ 4ನೇ ವರ್ಷದ ಪಿಲಿನಲಿಕೆ ಹಾಗೂ ಊದುಪೂಜೆಯು ನ.20 ಹಾಗೂ ನ.21 ರಂದು ಶ್ರೀ ರಾಮ ಸೇವಾ ಮಂದಿರ ಕೊಕ್ಕಡದಲ್ಲಿ ಸಂಭ್ರಮದಿಂದ ಜರುಗಿತು.

ನ.20 ರಂದು ನಡೆದ ಊದುಪೂಜೆಯನ್ನು ರವೀಶ್ ದೇವಾಡಿಗ ಕೊಕ್ಕಡ, ರುಕ್ಮಯ ಮಡಿವಾಳ ಮಲ್ಲಿಗೆ ಮಜಲು ನೆರವೇರಿಸಿದರು. ಕರಾವಳಿಯ ಕಲೆ ಯಕ್ಷಗಾನದ ಶ್ರೀ ದೇವಿ ಪಾತ್ರಧಾರಿ ಯಕ್ಷಪ್ರಿಯೆ ಶ್ರೀಮತಿ ಅರ್ಷಿಯಾ ಖಾನ್ , ಕರ್ನಾಟಕ ಟಿವಿ ಲೀಡರ್ ಅವಾರ್ಡ್ಸ್ 2025 ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ಮತ್ತು ಕರಾಟೆ ಸಾಧಕ ಮನ್ವಿತ್ ಕುಮಾರ್ ಯು ಇವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಧಾರ್ಮಿಕ ಮುಖಂಡರು, ಯಕ್ಷ ಪ್ರಿಯೇ ಅರ್ಷಿಯಾ ಖಾನ್, ಅಕ್ಷಯ ರಜಪೂತ್, ನೈಮಿಶ ವೆಂಜರ್ಸ್ ಬಾಲಕೃಷ್ಣ ನೈಮಿಶ, ಗಣೇಶ್ ಗೌಡ ಕುಲಾಯಿ ಉದ್ಯಮಿಗಳು, ಶಿವಾಗ್ನಿ ಶಾಖೆ ಕಲವಾರು ಇದರ ಸದಸ್ಯರು, ರೀಲ್ಸ್ ಖ್ಯಾತಿಯ ರೈಡಿಂಗ್ ಜೋಡಿ ಉಜಿರೆ, ತುಕ್ರಪ್ಪ ಶೆಟ್ಟಿ ನೂಜೆ ಪ್ರಗತಿಪರ ಕೃಷಿಕ, ನಾರಾಯಣ ಗೌಡ ರಕ್ತೇಶ್ವರಿ ಪೆಟ್ರೋಪಾಯಿಂಟ್ ಕೊಕ್ಕಡ, ಶ್ರೀ ಗಣೇಶ್ ಹಿತ್ತಿಲು ಕೊಕ್ಕಡ, ಬೀಮ್ ಭಟ್ ನೆಕ್ಕರೆ ಗೋಳಿತೊಟ್ಟು, ಗುರುರಾಜ್ ಭಟ್ ನೆಕ್ಕರೆ ಗೋಳಿತೊಟ್ಟು ಭಾಗಿಯಾಗಿದ್ದರು. ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ, ಯುವಕೇಸರಿ ಕಾವು ಕೌಕ್ರಾಡಿ, ಶ್ರದ್ದಾ ಗೆಳೆಯರ ಬಳಗ ಉಪ್ಪರ ಪಳಿಕೆ, ಭಗತ್ ಸಿಂಗ್ ಸೇವಾ ಯುವಶಕ್ತಿ ಕ್ರೌಕ್ರಾಡಿ, ಟೀಮ್ ಭವಾನಿ, ಟೀಮ್ ಸಿಂದೂರ ನೆಲ್ಯಾಡಿ ಉಪಸ್ಥಿತರಿದ್ದು ಸಹಕಾರವಿತ್ತರು. ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಹಗ್ಗಜಗ್ಗಾಟದ ನಿರೂಪಕ ಸುರೇಶ್ ಪಡಿಪಂಡ, ಯುವ ಪ್ರತಿಭೆ ಕುಮಾರಿ ಐಶ್ವರ್ಯ ನೆಲ್ಯಾಡಿ, ನಿರೂಪಿಸಿ, ಸ್ವಾಗತಿಸಿ ಧನ್ಯವಾದವಿತ್ತರು. 70 ನೇ ವರ್ಷದ ನಗರ ಭಜನಾ ಸಪ್ತಾಹದ ವಿಶೇಷ ಆಕರ್ಷಣೆಯಾಗಿ ಸ್ಥಳೀಯ ಹಾಗೂ ಆಹ್ವಾನಿತ ತಂಡಗಳಿಂದ ಕುಣಿತ ಭಜನೆ ಹಾಗೂ ಕೇಸರಿ ಗೆಳೆಯರ ಬಳಗ ಕೊಕ್ಕಡ ಇದರ ಪಾಯೋಜಕತ್ವದಲ್ಲಿ ಆಹ್ವಾನಿತ ಕುಣಿತ ಭಜನಾ ತಂಡ ಶ್ರೀ ಕೃಷ್ಣ ಮಹಿಳಾ ಮತ್ತಿ ಮಕ್ಕಳ ಭಜನಾ ಮಂಡಳಿ, ಆದೂರು , ಪೆರಾಲ್ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಚಂದ್ಕೂರು ಭಗತ್ ಸಿಂಗ್ ಸೇವಾ ಯುವಶಕ್ತಿ ಕಾಕ್ರಾಡಿ ಇದರ ಪ್ರಾಯೋಜಕತ್ವದಲ್ಲಿ ಚೆಂಡೆ ವಾದನ ಅದ್ದೂರಿಯಾಗಿ ನಡೆಯಿತು. ಪಿಲಿನಲಿಕೆ ಕಾರ್ಯಕ್ರಮದಂದು ತಮ್ಮ ತಮ್ಮ ಮನೆಗಳಿಗೆ ಆಹ್ವಾನಿಸಿ ಹುಲಿಪ್ರದರ್ಶನ ನೀಡಲು ಸಹಕರಿಸಿದ ಗಣ್ಯರಿಗೆ ಕೇಸರಿ ಗೆಳೆಯರ ಬಳಗ ಕೊಕ್ಕಡ ಕೇಸರಿ ಟೈಗರ್ಸ್ ಕೊಕ್ಕಡ ಅಭಿನಂದನೆ ತಿಳಿಸಿದ್ದಾರೆ.









