ಬೆಳ್ತಂಗಡಿ ತಾಲೂಕಿನ ಬಂದಾರು–ಕುಪ್ಪೆಟ್ಟಿ ಮುಖ್ಯ ರಸ್ತೆಯ ಪದ್ಮುಂಜ ಪೇಟೆಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಸಮಸ್ಯೆಯೊಂದು ಬೆಳಕಿಗೆ ಬಂದಿದೆ. ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿದ್ದ ಫೈಬರ್ ಹಂಪ್ಸ್‌ಗಳು ಹದಗೆಟ್ಟು ಹೋಗಿದ್ದು, ಅವುಗಳನ್ನು ಅಳವಡಿಸಲು ಬಳಸಿದ್ದ ಹ್ಯಾಂಕರ್ ಬೋಲ್ಟ್‌ಗಳು ರಸ್ತೆಯಲ್ಲೇ ಉಳಿದಿವೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಟೈರ್‌ಗಳು ಪಂಕ್ಚರ್ ಆಗಿರುವ ಘಟನೆಗಳು ನಡೆದಿವೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಶಾಲಾ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಈಗಾಗಲೇ ಹದಗೆಟ್ಟಿರುವ ಫೈಬರ್ ಹಂಪ್ಸ್‌ಗಳು ಒಂದು ಕಡೆಯಾದರೆ, ರಸ್ತೆಯಲ್ಲೇ ಚಾಚಿಕೊಂಡಿರುವ ಬೋಲ್ಟ್‌ಗಳು ಮತ್ತೊಂದು ಕಡೆ ವಾಹನ ಸವಾರರಿಗೆ ಅಪಾಯದ ಸಂಕೇತವಾಗಿವೆ. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಸಂಬಂಧಪಟ್ಟ ಇಲಾಖೆ ಈ ಸಮಸ್ಯೆಯನ್ನು ಇನ್ನೂ ಗಮನಿಸಿಲ್ಲವೇ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ರಸ್ತೆಯಲ್ಲಿರುವ ಅಪಾಯಕಾರಿ ಬೋಲ್ಟ್‌ಗಳನ್ನು ತೆರವುಗೊಳಿಸಿ, ಹದಗೆಟ್ಟಿರುವ ಫೈಬರ್ ಹಂಪ್ಸ್‌ಗಳನ್ನು ಸರಿಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯ ನಾಗರಿಕರ ಒಕ್ಕೊರಲ ಆಗ್ರಹವಾಗಿದೆ. ನಾಗರಿಕರ ಸುರಕ್ಷತೆ ಅಧಿಕಾರಿಗಳ ಆದ್ಯತೆಯಾಗಲಿ ಎಂಬುದೇ ಸಾರ್ವಜನಿಕರ ಆಶಯ.

Namana
Channel